ಕರ್ನಾಟಕದಲ್ಲಿ ಎಲ್ಲಕ್ಕಿಂತಲೂ ಮೊದಲಿಗೆ ಎಲ್ಲ ಜನರಿಗೆ ಒಳ್ಳೆಯ ಶಿಕ್ಷಣ ಒದಗಬೇಕು ಎಂಬುದು ಸೊರಬದ ಕಾಂಗ್ರೆಸ್ ಅಭ್ಯರ್ಥಿ ರಾಜು ತಲ್ಲೂರ ಅವರ ಕನಸು. ನನ್ನ ಕನಸಿನ ಕರ್ನಾಟಕ ಹೇಗಿರಬೇಕು ಎಂದು 'ಒನ್‌ಇಂಡಿಯಾ ಕನ್ನಡ'ದೊಂದಿಗೆ ಮಾತನಾಡಿದ ಅವರು, ಸಧೃಡ, ಪ್ರಗತಿಪರ, ಸಾಮಾಜಿಕ ನ್ಯಾಯ ಹೊಂದಿದ ಕರ್ನಾಟಕ ನಮ್ಮದಾಗಬೇಕು ಎಂಬ ಕನಸನ್ನು ಮುಂದಿಟ್ಟಿದ್ದಾರೆ.